ಈಗ ಬೇಸಿಗೆ, ಮಾವಿನ ಸೀಜನ್! ಈ ವರ್ಷ ಮಾವಿನ ಫಸಲು ಚೆನ್ನಾಗಿರುವುದರಿಂದ ಎಲ್ಲರ ಮನೆಯಲ್ಲೂ ಬೇರೆಬೇರೆ ವೆರೈಟಿಯ ಮಾವಿನ ಹಣ್ಣುಗಳನ್ನು ಕಾಣಬಹುದು. ಊರಲ್ಲಿ ನಮ್ಮ ಮನೆಯಲ್ಲಂತೂ ದಿನವೂ ಊಟಕ್ಕೆ ಮಾವಿನಕಾಯಿ ಅಥವಾ ಮಾವಿನಹಣ್ಣಿನ ಒಂದು ಅಡುಗೆಯಾದರೂ ಇದ್ದೇ ಇರುತ್ತದೆ.
ಹಳ್ಳಿಗಳ ಕಡೆ ಸಿಗುವ 'ಸಾಸಿವೆ ಮಾವಿನಹಣ್ಣು' ಸಿಹಿ - ಹುಳಿ ರುಚಿ ಹೊಂದಿದ್ದು ಅಡುಗೆಗೆ ಬಳಸಲು ಚೆನ್ನಾಗಿರುತ್ತದೆ. ಸಾಸಿವೆ, ನೀರ್ ಗೊಜ್ಜು ಇತ್ಯಾದಿ ಅಡುಗೆಗಳಿಗೆ ಸಾಸಿವೆ ಮಾವಿನಹಣ್ಣು ಇದ್ದರೇನೇ ಚೆನ್ನ! ಮಾವಿನಹಣ್ಣಿನ ನೀರ್ಗೊಜ್ಜು ತಯಾರಿಸುವ ವಿಧಾನ ಈ ಕೆಳಗಿನಂತಿದೆ..
ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಮೀಡಿಯಂ
ಬೇಕಾಗುವ ಸಾಮಗ್ರಿಗಳು:
ಒಗ್ಗರಣೆಗೆ: ಎಣ್ಣೆ - 3 ಟೀ ಸ್ಪೂನ್, ಒಣಮೆಣಸು - 1, ಉದ್ದಿನಬೇಳೆ - 1 ಟೀ ಸ್ಪೂನ್, ಸಾಸಿವೆ - 1 1/4 ಟೀ ಸ್ಪೂನ್, ಇಂಗು - ಚಿಟಿಕೆ, ಹಸಿಮೆಣಸು - 1, ಕರಿಬೇವು - 4 ಎಲೆಗಳು
ತಯಾರಿಸುವ ವಿಧಾನ:
English version
ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಮೀಡಿಯಂ
ಬೇಕಾಗುವ ಸಾಮಗ್ರಿಗಳು:
- ಸಾಸಿವೆ ಮಾವಿನಹಣ್ಣು (ಅಥವಾ ಸಣ್ಣ ಮಾವಿನಹಣ್ಣು) - 5 ಅಥವಾ 6
- ಜೋನಿ ಬೆಲ್ಲ - 7 ಟೇಬಲ್ ಸ್ಪೂನ್ ಅಥವಾ ಸಿಹಿಯಾಗುವಷ್ಟು
- ಉಪ್ಪು - 1 1/4 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
- ನೀರು - 2 ಕಪ್
ಒಗ್ಗರಣೆಗೆ: ಎಣ್ಣೆ - 3 ಟೀ ಸ್ಪೂನ್, ಒಣಮೆಣಸು - 1, ಉದ್ದಿನಬೇಳೆ - 1 ಟೀ ಸ್ಪೂನ್, ಸಾಸಿವೆ - 1 1/4 ಟೀ ಸ್ಪೂನ್, ಇಂಗು - ಚಿಟಿಕೆ, ಹಸಿಮೆಣಸು - 1, ಕರಿಬೇವು - 4 ಎಲೆಗಳು
ತಯಾರಿಸುವ ವಿಧಾನ:
- ಮಾವಿನಹಣ್ಣು ನೀರಿನಲ್ಲಿ ಸ್ವಚ್ಛವಾಗಿ ತೊಳೆದುಕೊಂಡು ಸಿಪ್ಪೆ ಬಿಡಿಸಿ ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ.
- ಇದಕ್ಕೆ ಉಪ್ಪು, ಬೆಲ್ಲ ಸೇರಿಸಿ ಕೈಯಲ್ಲಿ ಚೆನ್ನಾಗಿ ಕಿವುಚಿ. ಮಿಶ್ರಣಕ್ಕೆ 2 ಕಪ್ ನಷ್ಟು ನೀರು ಸೇರಿಸಿಕೊಂಡು ಮಿಕ್ಸ್ ಮಾಡಿ 10 ನಿಮಿಷ ಹಾಗೆಯೇ ಇಡಿ. ನಂತರ ರುಚಿ ನೋಡಿಕೊಂಡು ಉಪ್ಪು, ಬೆಲ್ಲ ಏನಾದರೂ ಬೇಕಿದ್ದರೆ ಸೇರಿಸಿ.
- ಒಗ್ಗರಣೆ ಸೌಟಿನಲ್ಲಿ ಎಣ್ಣೆ ಕಾಯಿಸಿ ಒಣಮೆಣಸು, ಉದ್ದಿನಬೇಳೆ, ಸಾಸಿವೆ, ಇಂಗು ಸೇರಿಸಿ ಕೈಯಾಡಿಸಿ. ಸಾಸಿವೆ ಚಟಪಟ ಎಂದನಂತರ ಕರಿಬೇವು, ಸೀಳಿದ ಹಸಿಮೆಣಸು ಸೇರಿಸಿ ಒಂದು ನಿಮಿಷ ಕೈಯಾಡಿಸಿ ಒಲೆಯಿಂದ ಇಳಿಸಿ. ಒಗ್ಗರಣೆ ಮಿಶ್ರಣವನ್ನು ಕಿವುಚಿದ ಮಾವಿನಹಣ್ಣಿಗೆ ಸೇರಿಸಿ ಮಿಕ್ಸ್ ಮಾಡಿ.
- ಸಿಹಿ - ಹುಳಿಯಾದ ನೀರ್ಗೊಜ್ಜನ್ನು ಅನ್ನದೊಡನೆ ಸವಿಯಿರಿ!
English version
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)