'ಬಾಕ್ಲವ' - ಇದು ಟರ್ಕಿಯ ಒಂದು ಸುಪ್ರಸಿದ್ಧ ಸಿಹಿತಿಂಡಿ. ನಾನು ಇದರ ಹೆಸರನ್ನು ಅನೇಕಬಾರಿ ಕೇಳಿದ್ದರೂ ಎಂದೂ ತಿಂದಿರಲಿಲ್ಲ. ಸುಮಾರು ದಿನಗಳ ಹಿಂದೆ ಪರಿಚಿತರೊಬ್ಬರು ನಮ್ಮ ಮನೆಗೆ ಬರುವಾಗ ಬಾಕ್ಲವಾ ವನ್ನು ತಂದಿದ್ದರು. ಅದನ್ನು ತಿಂದ ನಂತರ ನೆಟ್ ನಲ್ಲಿ ಜಾಲಾಡಿ ಬಾಕ್ಲವಾ ತಯಾರಿಸುವ ವಿಧಾನ ತಿಳಿದುಕೊಂಡೆ.
ಬಾಕ್ಲವಾ ತಯಾರಿಸಲು ನನ್ನಬಳಿ ವಾಲ್ನಟ್ ಇರಲಿಲ್ಲ. ಹೀಗಾಗಿ ಬಾದಾಮಿಯನ್ನು ಬಳಸಿ ಬಾಕ್ಲವಾ ತಯಾರಿಸಿದ್ದಾಯಿತು. ಅಳುಕುತ್ತಲೇ ಬಾದಾಮಿ ಬಳಸಿದ್ದರೂ ಬಾಕ್ಲವ ತಯಾರಾದ ನಂತರ ಅದು ಅಂಗಡಿಯಿಂದ ತಂದದ್ದರಷ್ಟೇ ಚೆನ್ನಾಗಿತ್ತು.
ನಾನು ಈ ರೆಸಿಪಿಯನ್ನು ಆಲ್ ರೆಸಿಪೀಸ್.ಕಾಮ್ ಎನ್ನುವ ವೆಬ್ ಸೈಟ್ ನಲ್ಲಿ ನೋಡಿ ಚಿಕ್ಕಪುಟ್ಟ ಬದಲಾವಣೆಗಳೊಂದಿಗೆ ಟ್ರೈ ಮಾಡಿದ್ದು. ಇಲ್ಲಿದೆ ನೋಡಿ ಬಾಕ್ಲವ ರೆಸಿಪಿ!
ತಯಾರಿಸಲು ಬೇಕಾಗುವ ಸಮಯ: 35 ನಿಮಿಷಗಳು
ಬೇಕಿಂಗ್ ಟೈಮ್: 50 - 55 ನಿಮಿಷಗಳು
ಈ ಅಳತೆಯಿಂದ 40 ಬಾಕ್ಲವಾ ಪೀಸ್ ಗಳನ್ನು ತಯಾರಿಸಬಹುದು
ಡಿಫಿಕಲ್ಟಿ ಲೆವೆಲ್: ಕಠಿಣ
ಬೇಕಾಗುವ ಸಾಮಗ್ರಿಗಳು:
ತಯಾರಿಸುವ ವಿಧಾನ:
ಟಿಪ್ಸ್:
ಬಾಕ್ಲವಾ ತಯಾರಿಸಲು ನನ್ನಬಳಿ ವಾಲ್ನಟ್ ಇರಲಿಲ್ಲ. ಹೀಗಾಗಿ ಬಾದಾಮಿಯನ್ನು ಬಳಸಿ ಬಾಕ್ಲವಾ ತಯಾರಿಸಿದ್ದಾಯಿತು. ಅಳುಕುತ್ತಲೇ ಬಾದಾಮಿ ಬಳಸಿದ್ದರೂ ಬಾಕ್ಲವ ತಯಾರಾದ ನಂತರ ಅದು ಅಂಗಡಿಯಿಂದ ತಂದದ್ದರಷ್ಟೇ ಚೆನ್ನಾಗಿತ್ತು.
ನಾನು ಈ ರೆಸಿಪಿಯನ್ನು ಆಲ್ ರೆಸಿಪೀಸ್.ಕಾಮ್ ಎನ್ನುವ ವೆಬ್ ಸೈಟ್ ನಲ್ಲಿ ನೋಡಿ ಚಿಕ್ಕಪುಟ್ಟ ಬದಲಾವಣೆಗಳೊಂದಿಗೆ ಟ್ರೈ ಮಾಡಿದ್ದು. ಇಲ್ಲಿದೆ ನೋಡಿ ಬಾಕ್ಲವ ರೆಸಿಪಿ!
ತಯಾರಿಸಲು ಬೇಕಾಗುವ ಸಮಯ: 35 ನಿಮಿಷಗಳು
ಬೇಕಿಂಗ್ ಟೈಮ್: 50 - 55 ನಿಮಿಷಗಳು
ಈ ಅಳತೆಯಿಂದ 40 ಬಾಕ್ಲವಾ ಪೀಸ್ ಗಳನ್ನು ತಯಾರಿಸಬಹುದು
ಡಿಫಿಕಲ್ಟಿ ಲೆವೆಲ್: ಕಠಿಣ
ಬೇಕಾಗುವ ಸಾಮಗ್ರಿಗಳು:
- ಫಿಲೋ ಪೇಸ್ಟ್ರಿ ಶೀಟ್ಸ್- 375 ಗ್ರಾಂ
- ಬೆಣ್ಣೆ - 250 ಗ್ರಾಂ
- ಸಕ್ಕರೆ - 1 ಕಪ್ (1 ಕಪ್ = 200 ಗ್ರಾಂ)
- ಬಾದಾಮಿ - 2 ಕಪ್ (ಟಿಪ್ಸ್ ನೋಡಿ)
- ಸಕ್ಕರೆಪುಡಿ - 4 ಟೇಬಲ್ ಚಮಚ
- ನೀರು - 1 ಕಪ್
- ರಸ ತೆಗೆದ ನಿಂಬೆಹಣ್ಣಿನ ಸಿಪ್ಪೆ - ಅರ್ಧ ಹಣ್ಣಿನದು
- ಲವಂಗ - 2
- ಜೇನುತುಪ್ಪ - 6 ಟೇಬಲ್ ಚಮಚ
- ಚಕ್ಕೆ / ದಾಲ್ಚಿನ್ನಿ ಪುಡಿ - 1 ಟೀ ಚಮಚ
ತಯಾರಿಸುವ ವಿಧಾನ:
- ಫಿಲೋ ಪೇಸ್ಟ್ರಿಯನ್ನು ಫ್ರಿಜ್ ನಿಂದ ಸ್ವಲ್ಪ ಮೊದಲೇ ತೆಗೆದಿಟ್ಟಿರಿ.
- ಬಾದಾಮಿಯನ್ನು ಸಣ್ಣಗೆ ಹೆಚ್ಚಿ, ಸಣ್ಣ ಉರಿಯಲ್ಲಿ ಪರಿಮಳ ಬರುವಂತೆ ಅಥವಾ ಹೊಂಬಣ್ಣ ಬರುವವರೆಗೆ ಹುರಿಯಿರಿ. ತಣ್ಣಗಾದ ನಂತರ ಇದಕ್ಕೆ 4 ಟೇಬಲ್ ಚಮಚದಷ್ಟು ಸಕ್ಕರೆಪುಡಿ, 1 ಟೀ ಚಮಚ ದಾಲ್ಚಿನ್ನಿ ಪುಡಿ ಸೇರಿಸಿ ಮಿಕ್ಸ್ ಮಾಡಿ ತಣಿಯಲು ಬಿಡಿ.
- ಬೇಕಿಂಗ್ ಟ್ರೇ ಗೆ ಬೆಣ್ಣೆ ಸವರಿಕೊಳ್ಳಿ. ನಾನು ಇಲ್ಲಿ 33*23 cm ಬೇಕಿಂಗ್ ಟ್ರೇ ಬಳಸಿದ್ದೇನೆ.
- ಓವನ್ ನ್ನು 180 ಡಿಗ್ರಿಗೆ ಪ್ರಿ-ಹೀಟ್ ಮಾಡಿಕೊಳ್ಳಿ.
- ನಾಜೂಕಾಗಿ ಫಿಲೋ ಪೇಸ್ಟ್ರಿಯ ಎರಡು ಶೀಟ್ ಗಳನ್ನು ತೆಗೆದು ಬೇಕಿಂಗ್ ಟ್ರೇಯಲ್ಲಿ ಜೋಡಿಸಿ. ಅದರಮೇಲೆ ಕರಗಿಸಿದ ಬೆಣ್ಣೆಯನ್ನು ಸವರಿ, ಮೇಲಿನಿಂದ ಇನ್ನೆರಡು ಪೇಸ್ಟ್ರಿ ಶೀಟ್ ಗಳನ್ನು ಜೋಡಿಸಿ. ಅದರಮೇಲೆ ಬೆಣ್ಣೆ ಸವರಿ ಮತ್ತೆ ಎರಡು ಶೀಟ್ ಜೋಡಿಸಿ. ಅರ್ಧಭಾಗದಷ್ಟು ಶೀಟ್ ಗಳು ಖಾಲಿಯಾಗುವವರೆಗೆ ಇದೇ ರೀತಿ ಮಾಡಿ.
- ಇದರಮೇಲೆ ಬೆಣ್ಣೆ ಸವರಿ, ಬಾದಾಮಿ ಮಿಶ್ರಣವನ್ನು ಹರವಿ.
- ಬಾದಾಮಿ ಮಿಶ್ರಣ ಹರವಿದ ನಂತರ ಮೇಲಿನಿಂದ ಎರಡು ಪೇಸ್ಟ್ರಿ ಶೀಟ್ ಜೋಡಿಸಿ ಬೆಣ್ಣೆ ಸವರಿ. ಪೇಸ್ಟ್ರಿ ಶೀಟ್ ಖಾಲಿಯಾಗುವವರೆಗೂ ಹೀಗೆಯೇ ಎರಡು ಶೀಟ್ ಇಟ್ಟು ಮೇಲಿನಿಂದ ಬೆಣ್ಣೆ ಸವರುತ್ತ ಹೋಗಿ.
- ಎಲ್ಲ ಶೀಟ್ ಗಳನ್ನು ಜೋಡಿಸಿದ ನಂತರ ಬಾಕ್ಲವ ವನ್ನು ಒಂದೇ ಅಳತೆಯ ವಜ್ರಾಕೃತಿ ಅಥವಾ ನಿಮ್ಮಿಷ್ಟದ ಆಕಾರಕ್ಕೆ ಕತ್ತರಿಸಿ. ಬೇಕಿಂಗ್ ಟ್ರೇಯನ್ನು ಪ್ರಿ-ಹೀಟ್ ಮಾಡಿದ ಓವನ್ ನಲ್ಲಿಟ್ಟು 50 - 55 ನಿಮಿಷ ಅಥವಾ ಹೊಂಬಣ್ಣ ಬರುವವರೆಗೆ ಬೇಯಿಸಿ.
- ಬಾಕ್ಲವ ಬೇಯುತ್ತಿರುವಾಗ ಸಕ್ಕರೆಪಾಕ ತಯಾರಿಸಿಕೊಳ್ಳಿ. ಒಂದು ಪಾತ್ರೆಯಲ್ಲಿ ಸಕ್ಕರೆ, ನೀರು ಸೇರಿಸಿ ಬಿಸಿಗಿಡಿ. ಸಕ್ಕರೆ ಕರಗಿದನಂತರ ಇದಕ್ಕೆ ಲವಂಗ, ಜೇನುತುಪ್ಪ, ನಿಂಬೆ ಸಿಪ್ಪೆ ಸೇರಿಸಿ ಸಣ್ಣ ಉರಿಯಲ್ಲಿ 15 - 20 ನಿಮಿಷ ಕುದಿಸಿ ಉರಿ ಆಫ್ ಮಾಡಿ. ನಂತರ ಇದರಲ್ಲಿರುವ ಲವಂಗ ಮತ್ತು ನಿಂಬೆ ಸಿಪ್ಪೆಯನ್ನು ತೆಗೆದುಬಿಡಿ.
- ಬೆಂದ ಬಾಕ್ಲವ ಬಿಸಿ ಇರುವಾಗಲೇ ಅದರಮೇಲೆ ಮೊದಲೇ ತಯಾರಿಸಿಟ್ಟ ಸಕ್ಕರೆಪಾಕವನ್ನು ಸುರಿಯಿರಿ. ಸರ್ವ್ ಮಾಡುವ ಮೊದಲು ಇದನ್ನು 2 ಘಂಟೆಕಾಲ ಸೆಟ್ ಆಗಲು ಬಿಡಿ.
ಟಿಪ್ಸ್:
- ನನ್ನ ಬಳಿ ವಾಲ್ನಟ್ ಇರದಿದ್ದರಿಂದ ಇಲ್ಲಿ ಬಾದಾಮಿ ಬಳಸಿದ್ದೇನೆ. ವಾಲ್ನಟ್ ಇದ್ದರೆ ಬಾಕ್ಲವ ತಯಾರಿಸಲು ಅದನ್ನೇ ಬಳಸಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)