ಒಣಗಿಸಿದ ಹಲಸಿನ ತೊಳೆ । ಹಲಸಿನ ಸೊಳೆ ಒಣಗಿಸುವ ವಿಧಾನ

ಬೇಸಿಗೆ ಸಮಯ ಬಂದಾಗ ನಮ್ಮೂರ ಕಡೆ ಹಲಸಿನ ಕಾಯಿ ಮತ್ತು ಹಲಸಿನ ಹಣ್ಣಿನ ಖಾದ್ಯಗಳ ತಯಾರಿ ಜೋರು. ನನ್ನ ತವರುಮನೆಯಲ್ಲಿ ಹಲಸಿನ ಕಾಯಿಯ ಚಿಪ್ಸ್, ಹಪ್ಪಳ ಮಾಡುವ ಸಮಯದಲ್ಲಿ ಹಲಸಿನ ತೊಳೆಗಳನ್ನು ಚೂರು ಮಾಡಿ ಒಣಗಿಸಿ ಇಟ್ಟುಕೊಳ್ಳುತ್ತಾರೆ. ಇದು ಸೀಜನ್ ಮುಗಿದ ನಂತರ ಯಾವಾಗಲಾದರೊಮ್ಮೆ ಹಲಸಿನ ಮೇಲೋಗರ ಮಾಡಲು ಚೆನ್ನಾಗಿರುತ್ತದೆ. ಹಲಸಿನ ತೊಳೆ ಒಣಗಿಸುವ ವಿಧಾನ ಇಂತಿದೆ: 


ತಯಾರಿಸಲು ಬೇಕಾಗುವ ಸಮಯ: 3 ಘಂಟೆ 
ಒಣಗಲು ಬೇಕಾಗುವ ಸಮಯ: 1 ವಾರ 
ಡಿಫಿಕಲ್ಟಿ ಲೆವೆಲ್: ಮೀಡಿಯಂ 

ಬೇಕಾಗುವ ಸಾಮಗ್ರಿಗಳು:

  • ಬಲಿತ ಹಲಸಿನ ಕಾಯಿ - 1
  • ಉಪ್ಪು - ರುಚಿಗೆ ತಕ್ಕಷ್ಟು 
ತಯಾರಿಸುವ ವಿಧಾನ:

  • ಹಲಸಿನ ಕಾಯಿ ಕತ್ತರಿಸಿ, ತೊಳೆಗಳನ್ನು ಬೇರ್ಪಡಿಸಿಕೊಳ್ಳಿ. 
  • ತೊಳೆಗಳನ್ನು ಚಿಕ್ಕ ಚೂರುಗಳಾಗಿ ಕತ್ತರಿಸಿಕೊಳ್ಳಿ. 
  • ಕತ್ತರಿಸಿದ ಹಲಸಿನ ತೊಳೆಗಳನ್ನು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಸಿ, 1 - 2 ಘಂಟೆಕಾಲ ನೆನೆಯಲು ಬಿಡಿ. 
  • ನಂತರ ಹೆಚ್ಚಿನ ನೀರನ್ನು ಹಿಂಡಿ ತೆಗೆದು, ತೊಳೆಗಳನ್ನು ಒಂದು ಪ್ಲೇಟ್ ನಲ್ಲಿ ಹರವಿ ಮೇಲಿನಿಂದ ಬಟ್ಟೆ ಮುಚ್ಚಿ ಬಿಸಿಲಿನಲ್ಲಿ ಒಣಗಿಸಿ. 
  • 5 - 6 ದಿನ ಅಥವಾ ಹಲಸಿನ ತೊಳೆ ಚೂರುಗಳು ನೀರಿನಂಶವೆಲ್ಲ ಒಣಗಿ ಗರಿಯಾಗುವತನಕ ಬಿಸಿಲಿನಲ್ಲಿ ಒಣಗಿಸಿ ನಂತರ ಗಾಳಿಯಾಡದ ಡಬ್ಬದಲ್ಲಿ ತುಂಬಿಡಿ. 
  • ಅಡುಗೆಗೆ ಬಳಸಲು ಅರ್ಧ ಘಂಟೆ ಮೊದಲು ಬೇಕಾದಷ್ಟು ಹಲಸಿನ ಚೂರುಗಳನ್ನು ನೀರಿನಲ್ಲಿ ನೆನೆಸಿಟ್ಟು ಬಳಸಿ. 
  • ಒಣಗಿಸಿಟ್ಟ ಹಲಸಿನ ತೊಳೆಯಿಂದ ತಯಾರಿಸುವ ಅಡುಗೆಗಳನ್ನು ಮುಂದಿನ ಪೋಸ್ಟ್ ಗಳಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. 


Click here for English version 

ಕಾಮೆಂಟ್‌ಗಳು