ಅಪ್ಪೆಹುಳಿ - ಇದು ಮಲೆನಾಡಿನ ಹವ್ಯಕರ ಮನೆಗಳಲ್ಲಿ ಸಾಮಾನ್ಯವಾಗಿ ತಯಾರಿಸುವ ಒಂದು ಮೇಲೋಗರ. ಹವ್ಯಕರಿಗೂ ಅಪ್ಪೆಹುಳಿಗೂ ಅವಿನಾಭಾವ ಸಂಬಂಧ. ಬಹಳ ಸುಲಭದಲ್ಲಿ ತಯಾರಸಬಹುದಾದ ಈ ಮೇಲೋಗರ ಊಟಕ್ಕೆ ರುಚಿ. ಕೆಲವರು ಅಪ್ಪೆಹುಳಿಯನ್ನು ಕುಡಿಯಲೂ ಇಷ್ಟಪಡುತ್ತಾರೆ.
ಒಳ್ಳೆಯ ಪರಿಮಳ ಇರುವ ಮಾವಿನಕಾಯಿ ಅಪ್ಪೆಹುಳಿಗೆ ಉತ್ತಮ. ಹುಳಿ ಅಂಶ ಇರುವ ಮಾವಿನಕಾಯಿ, ಕಂಚಿಕಾಯಿ, ನಿಂಬೆ, ಕರಿಮದ್ದಲು (ಸ್ಟಾರ್ ಫ್ರೂಟ್), ಹುಣಸೆಕಾಯಿ / ಹಣ್ಣು ಇವೆಲ್ಲದರಿಂದಲೂ ಅಪ್ಪೆಹುಳಿ ತಯಾರಿಸಬಹುದು.
ನಾನು ಈಗ ಶೇರ್ ಮಾಡುತ್ತಿರುವುದು ಹುಣಸೆಹಣ್ಣಿನ ಅಪ್ಪೆಹುಳಿ ತಯಾರಿಸುವ ವಿಧಾನ. ಸ್ವಲ್ಪ ಸಿಹಿ ಇರುವ ಹೊಸ ಹುಣಸೆಹಣ್ಣು ಅಪ್ಪೆಹುಳಿಗೆ ಚೆನ್ನಾಗಿರುತ್ತದೆ. ಹುಣಸೆಹಣ್ಣಿನ ಅಪ್ಪೆಹುಳಿ ತಯಾರಿಸುವ ವಿಧಾನ ಈ ಕೆಳಗಿನಂತಿದೆ:

ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಸುಲಭ
ಸರ್ವಿಂಗ್ಸ್: 5 - 6 ಜನರಿಗೆ ಆಗುತ್ತದೆ
ಬೇಕಾಗುವ ಸಾಮಗ್ರಿಗಳು:
- ಹುಣಸೆಹಣ್ಣು - 2 ಟೇಬಲ್ ಚಮಚ
- ನೀರು - 1 1/4 ಕಪ್
- ಉಪ್ಪು - 1 ಟೀ ಚಮಚ ಅಥವಾ ರುಚಿಗೆ ತಕ್ಕಷ್ಟು
- ಸಕ್ಕರೆ - 1 ಟೇಬಲ್ ಚಮಚ ಅಥವಾ ರುಚಿಗೆ ತಕ್ಕಷ್ಟು
- ಒಗ್ಗರಣೆಗೆ:
- ಎಣ್ಣೆ - 2 ಟೀ ಚಮಚ
- ಒಣಮೆಣಸು - ಒಂದು ಮೆಣಸಿನ ಅರ್ಧಭಾಗ
- ಸಾಸಿವೆ - 3/4 ಟೀ ಚಮಚ
- ಇಂಗು - ಚಿಟಿಕೆ
- ಅರಿಶಿನ - ಚಿಟಿಕೆ
- ಹಸಿಮೆಣಸು - 1
- ಕರಿಬೇವು - 5ರಿಂದ 6 ಎಲೆಗಳು
- ಜಜ್ಜಿದ ಬೆಳ್ಳುಳ್ಳಿ - 1 ಟೀ ಚಮಚ
ತಯಾರಿಸುವ ವಿಧಾನ:
- ಹುಣಸೆಹಣ್ಣಿಗೆ ಸ್ವಲ್ಪ ನೀರು ಸೇರಿಸಿ 10 ನಿಮಿಷ ನೆನೆಸಿ. ಬೆಚ್ಚಗಿನ ನೀರು ಸೇರಿಸಿದರೆ ಬೇಗ ನೆನೆದು ಮೆತ್ತಗಾಗುತ್ತದೆ.
- ನೆನೆದ ಹುಣಸೆಹಣ್ಣನ್ನು ಹಿಂಡಿ ರಸ ತೆಗೆಯಿರಿ. ಇದಕ್ಕೆ ಇನ್ನೂ ಸ್ವಲ್ಪ ನೀರು ಸೇರಿಸಿ 1 ಕಪ್ ನಷ್ಟು ಹದವಾಗಿ ಹುಳಿ ಇರುವ ಮಿಶ್ರಣ ತಯಾರಿಸಿಕೊಳ್ಳಿ.
- ಹುಣಸೆ ನೀರಿಗೆ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಸೇರಿಸಿ. ಈ ಅಪ್ಪೆಹುಳಿ ಸಿಹಿ - ಹುಳಿ ಮಿಶ್ರಿತವಾಗಿದ್ದರೆ ಚೆನ್ನಾಗಿರುತ್ತದೆ.
- ಒಗ್ಗರಣೆ ಸೌಟು ಅಥವಾ ಚಿಕ್ಕ ಬಾಣಲೆಯಲ್ಲಿ ಎಣ್ಣೆ ಬಿಸಿಗಿಡಿ. ಎಣ್ಣೆ ಸ್ವಲ್ಪ ಬಿಸಿಯಾದಾಗ ಒಣಮೆಣಸಿನ ಚೂರು, ಸಾಸಿವೆ, ಇಂಗು ಸೇರಿಸಿ ಕೈಯಾಡಿಸಿ.
- ಸಾಸಿವೆ ಸಿಡಿಯತೊಡಗಿದಾಗ ಚಿಟಿಕೆ ಅರಿಶಿನ, ಕರಿಬೇವು, ಹಸಿಮೆಣಸು ಹಾಕಿ ಒಮ್ಮೆ ಕೈಯಾಡಿಸಿ, ನಂತರ ಜಜ್ಜಿದ ಬೆಳ್ಳುಳ್ಳಿ ಸೇರಿಸಿ ಪರಿಮಳ ಬರುವಂತೆ ಒಂದು ನಿಮಿಷ ಹುರಿಯಿರಿ.
- ಬಿಸಿಬಿಸಿ ಒಗ್ಗರಣೆಯನ್ನು ಮೊದಲೇ ತಯಾರಿಸಿಟ್ಟ ಹುಣಸೆ ರಸಕ್ಕೆ ಸೇರಿಸಿ. ಮೆಣಸು ಹಾಗೂ ಕರಿಬೇವನ್ನು ಕೈಬೆರಳಿನಿಂದ ಸ್ವಲ್ಪ ಹಿಚುಕಿ ಚೆನ್ನಾಗಿ ಮಿಕ್ಸ್ ಮಾಡಿ.
- ರುಚಿಯಾದ ಅಪ್ಪೆಹುಳಿಯನ್ನು ಅನ್ನದೊಡನೆ ಸರ್ವ್ ಮಾಡಿ.
Click here for English version
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)