ಕ್ರಿಸ್ಪಿ ಚಾಕೊಲೇಟ್ ಬೈಟ್ಸ್ । ಚಾಕೊಲೇಟ್ ಕ್ರಾಕಲ್ಸ್ । ಚಾಕೋ ಕೋಟೆಡ್ ರೈಸ್ ಬಬಲ್ಸ್

ಚಾಕೊಲೇಟ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಮಕ್ಕಳಿಂದ ದೊಡ್ಡವರವರೆಗೂ ಸಾಮಾನ್ಯವಾಗಿ ಎಲ್ಲರಿಗೂ ಚಾಕೊಲೇಟ್ ಇಷ್ಟ. ನಾನು ಇಂದು ಶೇರ್ ಮಾಡುತ್ತಿರುವುದು ಚಾಕೊಲೇಟ್ ಬಳಸಿ ತಯಾರಿಸುವ ಒಂದು ಬಗೆಯ ಸ್ನ್ಯಾಕ್ಸ್. ಈ ರೆಸಿಪಿಗೆ ಬೇಕಿರುವುದು ಬರೀ ಮೂರೇ ಪದಾರ್ಥಗಳು - ಕುಕಿಂಗ್ ಚಾಕೊಲೇಟ್, ರೈಸ್ ಬಬಲ್ಸ್ ಮತ್ತು ಕೊಬ್ಬರಿ ಎಣ್ಣೆ. ರೈಸ್ ಬಬಲ್ಸ್ ಸಿಗದಿದ್ದರೆ ಉಪ್ಪಿನಂಶ ಕಡಿಮೆ ಇರುವ ಮಂಡಕ್ಕಿ ಬಳಸಬಹುದೆಂದು ನನ್ನ ಅನಿಸಿಕೆ; ಆದರೆ ನಾನಿನ್ನೂ ಮಂಡಕ್ಕಿ ಬಳಸಿ ನೋಡಿಲ್ಲ. 
ನಮ್ಮ ಮನೆಯಲ್ಲಿ ಮಕ್ಕಳಿಗೆ (ಮತ್ತು ದೊಡ್ಡವರಿಗೂ ಸಹ) ಈ ಸ್ನ್ಯಾಕ್ಸ್ ಬಹಳ ಇಷ್ಟ. ಗರಿಗರಿಯಾದ ಈ ಚಾಕೊಲೇಟ್ ಟ್ರೀಟ್ ಮಕ್ಕಳ ಪಾರ್ಟಿ, ಫುಡ್ ಸ್ಟಾಲ್, ಪ್ರವಾಸ, ಪಿಕ್ನಿಕ್ ಎಲ್ಲಕ್ಕೂ ಚೆನ್ನಾಗಿರುತ್ತದೆ. 


ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು 
ಡಿಫಿಕಲ್ಟಿ ಲೆವೆಲ್: ಸುಲಭ 
ಸರ್ವಿಂಗ್ಸ್: 27 ಚಿಕ್ಕ ಚಾಕೊಲೇಟ್ ಕಪ್ ಗಳು 

ಬೇಕಾಗುವ ಸಾಮಗ್ರಿಗಳು:
  • ಕುಕಿಂಗ್ ಚಾಕೊಲೇಟ್ (ನಾನು ಡಾರ್ಕ್ ಕುಕಿಂಗ್ ಚಾಕೊಲೇಟ್ ಬಳಸಿದ್ದೇನೆ) - 100 ಗ್ರಾಂ 
  • ರೈಸ್ ಬಬಲ್ಸ್ (ಬಿಳಿಯದು) - 2 1/2 ಕಪ್ 
  • ಕೊಬ್ಬರಿ ಎಣ್ಣೆ (ಅಥವಾ ಕೋಫಾ) - 1 1/2 ಟೇಬಲ್ ಚಮಚ 


ತಯಾರಿಸುವ ವಿಧಾನ:
  • ಡಬಲ್ ಬಾಯ್ಲರ್ ನಲ್ಲಿ ಕುಕಿಂಗ್ ಚಾಕೊಲೇಟ್ ಮತ್ತು ಕೊಬ್ಬರಿ ಎಣ್ಣೆ ಹಾಕಿ ಬಿಸಿಗಿಡಿ. ಡಬಲ್ ಬಾಯ್ಲರ್ ಇಲ್ಲದಿದ್ದರೆ ಒಂದು ಅಗಲದ ಬಾಣಲೆಯಲ್ಲಿ ಕಾಲುಭಾಗದವರೆಗೆ ನೀರು ಹಾಕಿ ಬಿಸಿಗಿಡಿ. ಈ ಪಾತ್ರೆಯೊಳಗೆ ಇನ್ನೊಂದು ಪಾತ್ರೆಯನ್ನಿಟ್ಟು ಅದರಲ್ಲಿ ಕುಕಿಂಗ್ ಚಾಕೊಲೇಟ್ ಮತ್ತು ಕೊಬ್ಬರಿ ಎಣ್ಣೆ ಹಾಕಿ ಬಿಸಿಗಿಡಿ. 
  • ಮಿಶ್ರಣವನ್ನು ಆಗಾಗ ಕಲಕುತ್ತಿರಿ. 
  • ಚಾಕೊಲೇಟ್ ಎಣ್ಣೆ ಕರಗಿ ನುಣ್ಣಗಿನ ಪೇಸ್ಟ್ ನಂತಾದಾಗ ಇದಕ್ಕೆ ರೈಸ್ ಬಬಲ್ಸ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
  • ಮಿಶ್ರಣವನ್ನು ಒಂದು ಅಗಲದ ಪ್ಲೇಟ್ ನಲ್ಲಿ ಸ್ವಲ್ಪ ಅಂತರದಲ್ಲಿ ಗೋಪುರದಂತೆ ಒಂದೊಂದು ದೊಡ್ಡ ಚಮಚದಷ್ಟು ಹಾಕುತ್ತ ಹೋಗಿ. ನಾನು ಇದಕ್ಕೆ ಚಿಕ್ಕ ಕಪ್ ಕೇಕ್ ತಯಾರಿಸುವ ಟ್ರೇ ಬಳಸಿದ್ದೇನೆ. 
  • ಚಾಕೊಲೇಟ್ ಮಿಶ್ರಣ ಹಾಕಿದ ಟ್ರೇಯನ್ನು ಫ್ರಿಜ್ ನಲ್ಲಿಟ್ಟು 10 ನಿಮಿಷ ಸೆಟ್ ಆಗಲು ಬಿಡಿ. 
  • ಟ್ರೇ ಯನ್ನು ಫ್ರಿಜ್ ನಿಂದ ಹೊರತೆಗೆದು ಟ್ರೇಯ ತಳವನ್ನು ಒಂದು ಅಥವಾ ಎರಡು ಸೆಕೆಂಡ್ ಕಾಲ ಬಿಸಿಮಾಡಿದರೆ ಚಾಕೋ ಕ್ರಿಸ್ಪೀಸ್ ಸುಲಭದಲ್ಲಿ ತಳ ಬಿಡುತ್ತವೆ. 
  • ತಯಾರಾದ ಚಾಕೊಲೇಟ್ ಕ್ರಾಕಲ್ಸ್ ನ್ನು ಬೇಕಾದಷ್ಟು ತಿಂದು, ಉಳಿದದ್ದನ್ನು ಗಾಳಿಯಾಡದ ಡಬ್ಬದಲ್ಲಿ ತುಂಬಿಡಿ. 



ಕಾಮೆಂಟ್‌ಗಳು