ಗೋಧಿ ಹಿಟ್ಟಿನ ದೋಸೆ ಸಾಮಾನ್ಯವಾಗಿ ಉಪವಾಸ ಅಥವಾ ಒಪ್ಪೊತ್ತಿನ ಸಮಯದಲ್ಲಿ ತಯಾರಿಸುವ ತಿಂಡಿ. ನಮ್ಮ ಮನೆಯಲ್ಲಿ ತಯಾರಿಸುವ ಗೋಧಿ ದೋಸೆ ನನಗೆ ಎಂದೂ ಇಷ್ಟವಾಗಿರಲಿಲ್ಲ. ನನ್ನ ಫ್ರೆಂಡ್ ಮೈತ್ರಿ ಯಿಂದ ಈ ದೋಸೆ ತಯಾರಿಸುವುದನ್ನು ಕಲಿತ ನಂತರ ನಮ್ಮ ಮನೆಯಲ್ಲಿ ಎಲ್ಲರ ಇಷ್ಟದ ಬ್ರೇಕ್ಫಾಸ್ಟ್ ಆಗಿಬಿಟ್ಟಿದೆ ಗೋಧಿ ದೋಸೆ. ಇನ್ಸ್ಟಂಟ್ ಆಗಿ ತಯಾರಿಸುವ ಈ ದೋಸೆಗೆ ಇತರ ದೋಸೆಗಳಂತೆ ಹಿಟ್ಟು ರುಬ್ಬಿ ಹುದುಗುಬರಲು ಇಡುವುದೂ ಬೇಕಿಲ್ಲ.
ಗೋಧಿ ಹಿಟ್ಟಿನ ದೋಸೆ / ತೆಳ್ಳೇವು / ಪೇಪರ್ ದೋಸೆ ತಯಾರಿಸುವ ವಿಧಾನ ಈ ಕೆಳಗಿನಂತಿದೆ:
ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಸರ್ವಿಂಗ್ಸ್: 3 ಜನರಿಗೆ ಆಗುತ್ತದೆ
ಬೇಕಾಗುವ ಸಾಮಗ್ರಿಗಳು:
- ಗೋಧಿ ಹಿಟ್ಟು - 1 1/2 ಕಪ್
- ಸೂಜಿ ರವಾ - 1/3 ಕಪ್
- ಹಸಿಮೆಣಸು - 1 ಅಥವಾ 2 (ಖಾರಕ್ಕೆ ತಕ್ಕಂತೆ)
- ಶುಂಠಿ - 1/2 ಇಂಚು
- ಜೀರಿಗೆ - 1 ಟೀ ಚಮಚ
- ಕರಿಬೇವು - 5ರಿಂದ 6 ಎಲೆಗಳು
- ಅರಿಶಿನ - 1/4 ಟೀ ಚಮಚ
- ಇಂಗು - ದೊಡ್ಡ ಚಿಟಿಕೆ
- ತೆಂಗಿನತುರಿ - 1/2 ಕಪ್
- ಉಪ್ಪು - 1 ಟೀ ಚಮಚ ಅಥವಾ ರುಚಿಗೆ ತಕ್ಕಷ್ಟು
- ನೀರು - ಸ್ವಲ್ಪ
ತಯಾರಿಸುವ ವಿಧಾನ:
- ಒಂದು ಬೌಲ್ ನಲ್ಲಿ ಗೋಧಿಹಿಟ್ಟು, ರವೆಯನ್ನು ಮಿಕ್ಸ್ ಮಾಡಿಕೊಳ್ಳಿ.
- ತೆಂಗಿನತುರಿ, ಹಸಿಮೆಣಸು, ಶುಂಠಿ, ಜೀರಿಗೆ, ಕರಿಬೇವು, ಅರಿಶಿನ, ಇಂಗು ಇಷ್ಟನ್ನೂ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ಬೇಕಾದಷ್ಟು ನೀರು ಸೇರಿಸಿ.
- ರುಬ್ಬಿದ ಮಿಶ್ರಣಕ್ಕೆ ಗೋಧಿಹಿಟ್ಟು, ರವಾ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸೌಟಿನಲ್ಲಿ ಮಿಕ್ಸ್ ಮಾಡಿ.
- ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸುತ್ತ ಗಂಟಿಲ್ಲದಂತೆ ದೋಸೆ ಹಿಟ್ಟಿನ ಹದಕ್ಕೆ ಕಲಸಿ.
- ಕಾದ ತವಾಕ್ಕೆ ಸ್ವಲ್ಪವೇ ಎಣ್ಣೆ ಸವರಿಕೊಂಡು ಒಂದು ಸೌಟಿನಷ್ಟು ಹಿಟ್ಟನ್ನು ತವಾದಮೇಲೆ ಹಾಕಿ, ಆದಷ್ಟು ತೆಳ್ಳಗಿನ ದೋಸೆ ತಯಾರಿಸಿ. ಮೀಡಿಯಮ್ ಉರಿಯಲ್ಲಿ ದೋಸೆ ಸ್ವಲ್ಪ ಗರಿಯಾಗುವತನಕ ಬೇಯಿಸಿ.
- ಬಿಸಿಬಿಸಿ ದೋಸೆಯನ್ನು ಚಟ್ನಿಯೊಡನೆ ಸರ್ವ್ ಮಾಡಿ.
ಟಿಪ್ಸ್:
- ರವೆಯನ್ನು ಜಾಸ್ತಿ ಹಾಕಿದರೆ ದೋಸೆ ಹೆಚ್ಚು ಗರಿಯಾಗಿ ಬರುತ್ತದೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)