ಬೀಟ್ರೂಟ್ ಬರ್ಫಿ

ತರಕಾರಿ ಬಳಸಿ ತಯಾರಿಸುವ ಸಿಹಿ ತಿಂಡಿಗಳಲ್ಲಿ ಬೀಟ್ರೂಟ್ ಬರ್ಫಿಯೂ ಒಂದು. ನಮ್ಮ ಮನೆಯಲ್ಲಿ ಮಕ್ಕಳಿಗೆ ಕೈಗೆ ಅಂಟದ ತಿಂಡಿಗಳು ಇಷ್ಟ. ಚಂದದ ಬಣ್ಣದೊಂದಿಗೆ ರುಚಿಕರವಾಗಿರುವ ಈ ಬರ್ಫಿ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಬೀಟ್ರೂಟ್ ಬರ್ಫಿ ತಯಾರಿಸುವ ವಿಧಾನ ಈ ಕೆಳಗಿನಂತಿದೆ:ತಯಾರಿಸಲು ಬೇಕಾಗುವ ಸಮಯ: 30 ನಿಮಿಷಗಳು 

ಡಿಫಿಕಲ್ಟಿ ಲೆವೆಲ್: ಕಷ್ಟಕರ 

ಸರ್ವಿಂಗ್ಸ್: ಈ ಅಳತೆಯಿಂದ 12 ಬರ್ಫಿಗಳನ್ನು ತಯಾರಿಸಬಹುದು 


ಬೇಕಾಗುವ ಸಾಮಗ್ರಿಗಳು:

ಬೀಟ್ ರೂಟ್ ತುರಿದದ್ದು - 1 ಕಪ್ 

ತೆಂಗಿನತುರಿ - 1 ಕಪ್ 

ಸಕ್ಕರೆ - 1 ಕಪ್ 

ತುಪ್ಪ - 3 ಟೇಬಲ್ ಚಮಚ 

ಏಲಕ್ಕಿ ಪುಡಿ - 1/2 ಟೀ ಚಮಚ 


ತಯಾರಿಸುವ ವಿಧಾನ: 

  • ತೆಂಗಿನ ತುರಿಯನ್ನು ಮಿಕ್ಸಿ ಅಥವಾ ಬ್ಲೆಂಡರ್ ನಲ್ಲಿ 2 - 3 ಸೆಕೆಂಡ್ ತಿರುವಿ ತರಿಯಾಗಿ ಮಾಡಿಕೊಳ್ಳಿ. 
  • ಒಂದು ದಪ್ಪ ತಳದ ಬಾಣಲೆಯನ್ನು ಬಿಸಿಗಿಟ್ಟು 2 ಟೇಬಲ್ ಚಮಚದಷ್ಟು ತುಪ್ಪ, ಬೀಟ್ ರೂಟ್ ತುರಿ ಸೇರಿಸಿ ಎರಡು ನಿಮಿಷ ಅಥವಾ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. 
  • ನಂತರ ಈ ಮಿಶ್ರಣಕ್ಕೆ ತೆಂಗಿನತುರಿ, ಸಕ್ಕರೆ ಸೇರಿಸಿ ಮಾಧ್ಯಮ ಉರಿಯಲ್ಲಿ ಮಿಶ್ರಣ ಗಟ್ಟಿಯಾಗುವತನಕ ಕೈಯಾಡಿಸುತ್ತಿರಿ. 
  • ಮಿಶ್ರಣ ಗಟ್ಟಿಯಾಗಿ ಪಾತ್ರೆಯ ಅಂಚು ಬಿಟ್ಟು, ಮುದ್ದೆಯಂತೆ ಆಗತೊಡಗಿದಾಗ ಇದಕ್ಕೆ ಒಂದು ಟೇಬಲ್ ಚಮಚದಷ್ಟು ತುಪ್ಪ ಸೇರಿಸಿ.  ಬರ್ಫಿ ಮಿಶ್ರಣ ಗಟ್ಟಿಯಾಗುವ ಹದ ಬರಲು ನನಗೆ ಸುಮಾರು 30 ನಿಮಿಷ ತೆಗೆದುಕೊಂಡಿದೆ. ಹೆಚ್ಚು ಬರ್ಫಿ ತಯಾರಿಸುವುದಾದರೆ ಇನ್ನೂ ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತದೆ. 
  • ಬರ್ಫಿ ಮಿಶ್ರಣ ತಳ ಬಿಟ್ಟು, ಕೈಯಾಡಿಸಲು ತುಂಬಾ ಗಟ್ಟಿ ಎನ್ನಿಸುವಂತಾದಾಗ ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ ಇದನ್ನು ಜಿಡ್ಡು ಸವರಿದ ಪ್ಲೇಟ್ ಮೇಲೆ ಹರವಿ. 
  • ಬರ್ಫಿ ಮಿಶ್ರಣ ಬೆಚ್ಚಗಿರುವಾಗಲೇ ಬೇಕಾದ ಆಕಾರಕ್ಕೆ ಕತ್ತರಿಸಿ, ಪೂರ್ತಿ ತಣ್ಣಗಾದ ನಂತರ ಪ್ಲೇಟ್ ನಿಂದ ತೆಗೆಯಿರಿ. 


Click here for English version

ಕಾಮೆಂಟ್‌ಗಳು