ಆರೆಂಜ್ ಫ್ಲೇವರ್ಡ್ ಎನರ್ಜಿ ಬಾಲ್ಸ್ | ಎನರ್ಜಿ ಬೈಟ್ಸ್

Click here for English version

ನಮ್ಮ ದಿನನಿತ್ಯದ ಜೀವನದಲ್ಲಿ ಆರೋಗ್ಯಕರ ಆಹಾರ ಸೇವನೆ ಬಹಳ ಮುಖ್ಯ. ಪರಿಪೂರ್ಣ ಆಹಾರವೆಂದರೆ ಹಣ್ಣು, ತರಕಾರಿ, ಹೈನು ಪದಾರ್ಥಗಳು, ಒಣಹಣ್ಣುಗಳು, ಬೇಳೆ, ಕಾಳು ಇವೆಲ್ಲವೂ ಒಂದು ನಿಯಮಿತ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಪೂರೈಕೆಯಾಗಬೇಕು.  

ನಾನು ಇಲ್ಲಿ ಶೇರ್ ಮಾಡುತ್ತಿರುವ ಎನರ್ಜಿ ಬಾಲ್ಸ್ ರೆಸಿಪಿ ಪ್ರವಾಸ, ಟ್ರೆಕ್ಕಿಂಗ್, ಆಟೋಟ, ಮಕ್ಕಳ ಸ್ನಾಕ್ಸ್ ಎಲ್ಲಕ್ಕೂ ಚೆನ್ನಾಗಿರುತ್ತದೆ. ಈ ಎನರ್ಜಿ ಬಾಲ್ಸ್ ನ್ನು ನಿಮ್ಮಿಷ್ಟದ ಯಾವುದೇ ಬಗೆಯ ಒಣಹಣ್ಣು ಅಥವಾ ನಟ್ಸ್ ಬಳಸಿ ತಯಾರಿಸಬಹುದು. ನಮ್ಮ ಮಕ್ಕಳ ಸ್ಕೂಲ್ ನಲ್ಲಿ ನಟ್ಸ್ ಒಯ್ಯುವಂತಿಲ್ಲವಾದ್ದರಿಂದ ನಾನು ಈ ರೆಸಿಪಿಯಲ್ಲಿ ಯಾವುದೇ ಬಗೆಯ ನಟ್ಸ್ ಬಳಸಿಲ್ಲ. 

ಆರೇಂಜ್ ಫ್ಲೇವರ್ಡ್ ಎನರ್ಜಿ ಬಾಲ್ಸ್ ರೆಸಿಪಿ ಈ ಕೆಳಗಿನಂತಿದೆ:


ತಯಾರಿಸಲು ಬೇಕಾಗುವ ಸಮಯ: 20 - 25 ನಿಮಿಷಗಳು 

ಡಿಫಿಕಲ್ಟಿ ಲೆವೆಲ್: ಮೀಡಿಯಮ್  

ಈ ಅಳತೆಯಿಂದ ಸುಮಾರು 23 ಎನರ್ಜಿ ಬಾಲ್ ಗಳನ್ನು ತಯಾರಿಸಬಹುದು 

ಬೇಕಾಗುವ ಸಾಮಗ್ರಿಗಳು:

  • ಓಟ್ಸ್ - 1 ಕಪ್ 
  • ಡೆಸಿಕೇಟೆಡ್ ಕೋಕೊನಟ್ (ಒಣ ಕೊಬ್ಬರಿತುರಿ) - 1/2 ಕಪ್ 
  • ಬೀಜ ತೆಗೆದ ಖರ್ಜೂರ - 2 1/2 ಕಪ್ 
  • ಚಿಯಾ ಸೀಡ್ಸ್ - 4 ಟೇಬಲ್ ಚಮಚ 
  • ಕೊಕೋವಾ ಪೌಡರ್ - 2 ಟೇಬಲ್ ಚಮಚ 
  • ಆರೇಂಜ್ ಝೆಸ್ಟ್ (ಆರೇಂಜ್ ಸಿಪ್ಪೆಯ ತುರಿ) - 1 ಟೇಬಲ್ ಚಮಚ 
  • ಕೊಬ್ಬರಿ ಎಣ್ಣೆ - 2 ಟೇಬಲ್ ಚಮಚ

ತಯಾರಿಸುವ ವಿಧಾನ: 

  • ಮಿಕ್ಸಿ ಅಥವಾ ಫುಡ್ ಪ್ರೊಸೆಸರ್ ನಲ್ಲಿ ಓಟ್ಸ್ ನ್ನು ತರಿಯಾಗಿ ಪುಡಿಮಾಡಿಕೊಳ್ಳಿ.
  • ಓಟ್ಸ್, ಡೆಸಿಕೇಟೆಡ್ ಕೋಕೊನಟ್, ಚಿಯಾ ಸೀಡ್ಸ್ ಇಷ್ಟನ್ನೂ ಪ್ರತ್ಯೇಕವಾಗಿ ಡ್ರೈ ರೋಸ್ಟ್ ಮಾಡಿಕೊಳ್ಳಿ. ಹುರಿದ ಪರಿಮಳ ಬರುತ್ತಿದ್ದಂತೆ ಉರಿ ಆಫ್ ಮಾಡಿ, ತಣಿಯಲು ಬಿಡಿ. 
  • ಖರ್ಜೂರವನ್ನು ಮಿಕ್ಸಿಗೆ ಹಾಕಲು ಅನುಕೂಲವಾಗುವಂತೆ ಸಣ್ಣ ಚೂರುಗಳಾಗಿ ಕತ್ತರಿಸಿಕೊಳ್ಳಿ. 
  • ಖರ್ಜೂರದ ಚೂರುಗಳನ್ನು ಮಿಕ್ಸಿ ಅಥವಾ ಫುಡ್ ಪ್ರೊಸೆಸರ್ ನಲ್ಲಿ ಹಾಕಿ ಜಿಗುಟಾದ ಪೇಸ್ಟ್ ನಂತೆ ಆಗುವವರೆಗೆ ತಿರುವಿ. ಇದಕ್ಕೆ ಉಳಿದೆಲ್ಲ ಸಾಮಗ್ರಿಗಳನ್ನೂ 2 - 3 ಹಂತಗಳಲ್ಲಿ ಸೇರಿಸಿ ಮಿಕ್ಸ್ ಮಾಡುತ್ತ ಹೋಗಿ. 
  • ನಾನು ಇಲ್ಲಿ ಮೀಡಿಯಮ್ ಸೈಜಿನ ಮಿಕ್ಸಿ ಜಾರ್ ಬಳಸಿದ್ದೇನೆ. ವ್ಹಿಪ್ ಸೆಟ್ಟಿಂಗ್ ಬಳಸಿ ನಿಧಾನವಾಗಿ ಮಿಕ್ಸ್ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಮಿಶ್ರಣ ಉಂಡೆ ಕಟ್ಟುವ ಹದಕ್ಕೆ ಬರುತ್ತದೆ. 
  • ತಯಾರಾದ ಮಿಶ್ರಣದಿಂದ ನಿಮಗೆ ಬೇಕಾದ ಆಕಾರ ಹಾಗೂ ಸೈಜಿನ ಎನರ್ಜಿ ಬೈಟ್ ಗಳನ್ನು ತಯಾರಿಸಿ ಸವಿಯಿರಿ. 
  • ಇವನ್ನು ರೂಮ್ ಟೆಂಪರೇಚರ್ ನಲ್ಲಿ 4 - 5 ದಿನ ಇಡಬಹುದು. ಫ್ರಿಜ್ ನಲ್ಲಿಟ್ಟರೆ 2 - 3 ವಾರದವರೆಗೂ ಚೆನ್ನಾಗಿರುತ್ತದೆ.   


ಟಿಪ್ಸ್:

  • ಈ ಎನರ್ಜಿ ಬಾಲ್ ಗಳನ್ನು ನಿಮ್ಮಿಷ್ಟದ ಯಾವುದೇ ಬಗೆಯ ಒಣಹಣ್ಣು ಅಥವಾ ನಟ್ಸ್ ಬಳಸಿ ತಯಾರಿಸಬಹುದು. 

ಕಾಮೆಂಟ್‌ಗಳು